ಜ್ಞಾನಪ್ರಸಾರವನ್ನು ತನ್ನ ಗುರಿಯಾಗಿಸಿಕೊಂಡು, ವಿವಿಧ ರೂಪಗಳಲ್ಲಿ ಸನಾತನಧರ್ಮವನ್ನು ಜನಮಾನಸಕ್ಕೆ ತಲುಪಿಸುತ್ತಿದೆ ಶ್ರೀಭಾರತೀ ಪ್ರಕಾಶನ.
ಶ್ರೀಸಂಸ್ಥಾನದವರ ದಿವ್ಯಸಂಕಲ್ಪ, ಮಾರ್ಗದರ್ಶನಗಳೊಂದಿಗೆ 2000ರಲ್ಲಿ ಪ್ರಾರಂಭಗೊಂಡ ಸಂಸ್ಥೆಯು, ಪೌರಾಣಿಕ ವಿಚಾರಗಳು, ವೈಜ್ಞಾನಿಕ ಸಂಶೋಧನೆಗಳು, ಶಿಶುಗೀತೆ, ಮಕ್ಕಳ ಕಥೆ, ರಾಮಾಯಣ ಮಹಾಭಾರತಗಳು, ಆಹಾರಕ್ರಮ, ಜೌತಿಷ, ವಾಸ್ತು, ಜೀವನಕ್ರಮ, ಕಲೆ, ವಿಜ್ಞಾನ, ಸಂಶೋಧನೆ, ಅಧ್ಯಾತ್ಮ ಹೀಗೆ ಸನಾತನಧರ್ಮದ ಹತ್ತು ಹಲವು ವಿಚಾರಗಳನ್ನು ಒಳಗೊಂಡ ಸುಮಾರು 270ಕ್ಕೂ ಹೆಚ್ಚು ಕೃತಿಗಳನ್ನು ಸಮಾಜಕ್ಕೆ ನೀಡಿದೆ. ಶ್ರೀಸಂಸ‍್ಥಾನದವರ ಲೇಖನಿಯಿಂದ ಹರಿದುಬಂದ ಹತ್ತಾರು ಕೃತಿಗಳು ಮತ್ತು ಪ್ರವಚನಗಳ ಧ್ವನಿಮುದ್ರಣ ಸಂಸ‍್ಥೆಯ ಪ್ರಮುಖ ಕಾರ್ಯಗಳಲ್ಲೊಂದು. ಭಾರತೀಯ ವಿಚಾರಧಾರೆಯನ್ನು ಒಳಗೊಂಡಿರುವ ಆಟಿಕೆಗಳನ್ನು, ಸುವಸ್ತುಗಳನ್ನು ನೂತನವಾಗಿ ವಿನ್ಯಾಸಗೊಳಿಸಿ ಸಮಾಜಕ್ಕೆ ತಲುಪಿಸುತ್ತಿದೆ.
ಹಲವು ಅಪೂರ್ವ ಸಾಧನೆಗಳ ಗರಿ ಸಂಸ್ಥೆಯದ್ದು.
- 2014ರಲ್ಲಿ ಸತತ 60 ದಿನಗಳಲ್ಲಿ ‘ಗುರುಗ್ರಂಥಮಾಲಿಕೆ’ಯ 60 ಕೃತಿಗಳ ಲೋಕಾರ್ಪಣೆಗಾಗಿ ಲಿಮ್ಕಾ ದಾಖಲೆಯ ಗೌರವ.
- 2015ರಲ್ಲಿ ನಿರಂತರ 60 ದಿನಗಳಲ್ಲಿ 60 ಮಕ್ಕಳ ಪುಸ್ತಕಗಳ ಪ್ರಕಟಣೆ.
- 2016ರಲ್ಲಿ ನಿರಂತರ 60 ದಿನಗಳಲ್ಲಿ ಪುಸ್ತಕಗಳ, ಸುವಸ್ತುಗಳ ಪ್ರಕಟಣೆ.
- ಉತ್ತಮ ಗುಣಮಟ್ಟದ ನಿರ್ವಹಣೆಗಾಗಿ ISO ಮಾನ್ಯತೆ.