Categories

Kumaravyasa Bharata Kathamrutha | ಕುಮಾರವ್ಯಾಸ ಭಾರತ ಕಥಾಮೃತ

600.00

Published Year 2007
Language
Number of pages 440
Categories: ,

Description

ಕೃಷ್ಣನ ಕಥೆ ಯಾರನ್ನು ಸೆಳೆಯದು? ಕೃಷ್ಣ ಎನ್ನುವ ಶಬ್ದಕ್ಕೇ ಆಕರ್ಷಣೆ ಎಂದು ಅರ್ಥವಾಗಿರುವಾಗ ಅವನ ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೂ ಅದೇ ಗುಣ ಇರಬೇಕಲ್ಲ! ಹಾಗಾಗಿಯೇ ಕೃಷ್ಣಕಥೆ ವ್ಯಾಸರನ್ನು ಸೆಳೆಯಿತು. ಈ ಸೆಳೆತಕ್ಕೆ ಶುಕ, ವೈಶಂಪಾಯನ, ಮಾಘ, ಜಯದೇವ, ಕುಮಾರವ್ಯಾಸ ಹೀಗೆ ಅಸಂಖ್ಯರು ಒಳಗಾದರು.

ಇದೀಗ ಇದು ಶ್ರೀ ಲಕ್ಷ್ಮೀನಾರಾಯಣ ಭಟ್ಟರನ್ನು ಸೆಳೆದಿದೆ. ಆ ಸೆಳೆತಕ್ಕೆ ಕುಮಾರವ್ಯಾಸ ಭಾರತ ನೆರವಾಗಿದೆ. ಕುಮಾರವ್ಯಾಸನಿಗೆ ಕೃಷ್ಣಕಥೆ ಹೇಳಲು ಪಾಂಡವರು ನೆವವಾದರೆ, ಭಟ್ಟರಿಗೆ ಕೃಷ್ಣಕಥೆ ಹೇಳಲು ಕುಮಾರವ್ಯಾಸ ನೆವವಾಗುತ್ತಾನೆ.

ಕುಮಾರವ್ಯಾಸನ ಲಲಿತ ಕಾವ್ಯಕ್ಕೂ ಸೆಳೆಯುವ ಈ ಗುಣವಿದೆ. ಅವನು ಉತ್ಕೃಷ್ಟ ಕವಿ. ಕನ್ನಡ ಸಾಹಿತ್ಯಕ್ಕೆ ಮೆರುಗು ತಂದವ.

ಅವನ ಕಾವ್ಯದ ಹೊಸಗನ್ನಡ ಗದ್ಯದ ಈ ಕೃತಿ ಸಮಕಾಲದಲ್ಲಿ ಎರಡು ಕಾರ್ಯವನ್ನು ಮಾಡಿ ಸಾರ್ಥಕವಾಗುತ್ತದೆ. ಕುಮಾರವ್ಯಾಸನಿಗೆ ಪ್ರವೇಶಿಕೆಯಾಗಿ ಸಾರ್ಥಕತೆ ಕಾಣುತ್ತಲೇ ಕೃಷ್ಣನ ದಿವ್ಯ ಚರಿತೆಯಲ್ಲಿ ಅವಗಾಹನೆ ಮಾಡಿಸುತ್ತದೆ.

ಇಂತಹ ಕೃತಿಗಾಗಿ – ಸತ್ಕೃತಿಗಾಗಿ ಭಟ್ಟರು ಪ್ರಶಂಸಾರ್ಹರು.

ವಿದ್ವಾನ್ ಜಗದೀಶಶರ್ಮಾ ಸಂಪ

Reviews

There are no reviews yet.

Be the first to review “Kumaravyasa Bharata Kathamrutha | ಕುಮಾರವ್ಯಾಸ ಭಾರತ ಕಥಾಮೃತ”

Your email address will not be published. Required fields are marked *

error: Content is protected !!