Description
ರಾಮನೂ ನಮ್ಮ-ನಿಮ್ಮಂತೆ ಮನುಷ್ಯ, ನಮಗಿಂತ ಹೆಚ್ಚು ಸಾಧನೆ ಮಾಡಿ ಪರುಷೋತ್ತಮನಾದವ’ ಎನ್ನುವ ವಾದವೊಂದು ಪ್ರಚಲಿತವಾಗಿದೆ. ಈ ವಾದ ಮಾಡುವವರು ‘ರಾಮಾಯಣದಲ್ಲಿ ವಾಲ್ಮೀಕಿಗಳು ರಾಮ ದೇವರು ಎಂದಿಲ್ಲ’ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಮಾಯಣ, ಹೆಜ್ಜೆ ಹೆಜ್ಜೆಗೆ ರಾಮನ ದಿವ್ಯತೆಯನ್ನು ಗುರುತಿಸುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಅದು ಕಾಣಸಿಗುತ್ತದೆ. ಅದನ್ನು ಸಾಧಿಸುವ ಸತ್ಕರ‍್ಯವನ್ನು ಈ ಕೃತಿ ಮಾಡಿದೆ.
ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಅದರ ಆಶಯವನ್ನು ವಿವರಿಸುತ್ತಾ, ರ‍್ಕಬದ್ಧವಾಗಿ ಸಾಗುವ ಈ ಕೃತಿ, ಶಾಸ್ತ್ರೀಯ ಕ್ರಮದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಇಲ್ಲಿ ಕಲ್ಪನೆಯಿಲ್ಲ, ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ರಾಮಾಯಣದಲ್ಲಿದೆ ಎನ್ನುವ ಅಪಭ್ರಂಶವಿಲ್ಲ, ತನಗನ್ನಿಸಿದ್ದೇ ಸತ್ಯ ಎಂದುಕೊಳ್ಳುವ ಅಹಂಕಾರವೂ ಇಲ್ಲ. ಋಷಿಹೃದಯದ ಒಳಹೊಕ್ಕು, ಆ ರ‍್ಷತನವನ್ನು ಆಸ್ವಾದಿಸುತ್ತಾ, ಸತ್ಯವನ್ನು ಮಾತ್ರ ಹೇಳುತ್ತೇನೆ ಎನ್ನುವ ವಿನಯಪರ‍್ವಕವಾದ ದಿಟ್ಟತನ ಇಲ್ಲಿದೆ.
ಡಾ. ಕೆ. ಎಸ್. ಕಣ್ಣನ್ ಬರೆಯುವುದೂ ಹೀಗೇ, ಬದುಕುವುದೂ ಹೀಗೇ.
ಅವರ ಈ ಕೃತಿ ಪ್ರಮಾಣಸಿದ್ಧ; ಸತ್ಯನಿಷ್ಠ; ಜ್ಞಾನತತ್ಪರ.
-ವಿದ್ವಾನ್ ಜಗದೀಶಶರ್ಮ ಸಂಪ
Reviews
There are no reviews yet.