Description
‘ಏ ಮನುಜನೆ ನಿನ್ನ ನೀ ತಿಳಿಯಲಿಲ್ಲೋ’ ಎಂದು ಹಾಡುತ್ತಾ ಲೋಕೋದ್ಧರಣ ಮಾಡಿದವರು ಶ್ರೀಶ್ರೀತ್ರಿವಿಕ್ರಮಾನಂದಸರಸ್ವತೀ ಮಹಾಸ್ವಾಮಿಗಳು.
18ನೇ ಶತಮಾನದಲ್ಲಿ ಕನ್ನಡನಾಡನ್ನು ಪಾವನಗೊಳಿಸಿದ ಸಂತವರೇಣ್ಯರವರು. ಶಿವನಿಂದ ಆರಂಭವಾದ ನಾಥ ಪರಂಪರೆಯನ್ನು ಬೆಳಗಿದ ದೀಪ್ತಿ ಅವರು. ಅಂತಹ ಮಹಾತ್ಮರ ಮಹಿಮೆಯ ಪರಿಚಯದ ಕೃತಿ ‘ಸಂತತ್ರಿವಿಕ್ರಮ’.
ವಿದ್ವಾನ್ ಜಗದೀಶಶರ್ಮರು ರಚಿಸಿರುವ ಕೃತಿಯಲ್ಲಿ ಸಂತತ್ರಿವಿಕ್ರಮರ ಜೀವನ ದರ್ಶನವಿದೆ. ಜೀವನ ಸಂದೇಶ ನೀಡುವ ಕೆಲವು ಪದ್ಯಗಳೂ ಇವೆ.
52 ಪುಟಗಳ ಈ ಪುಸ್ತಕ ಸುಲಲಿತವಾಗಿ ಓದಿಸಿಕೊಳ್ಳುತ್ತದೆ.
Reviews
There are no reviews yet.