Categories

ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗಳ ಸಂದೇಶ ಸಾರುವ ದಿವ್ಯಜೀವನ ಪುಸ್ತಕ ಲೋಕಾರ್ಪಣೆ!

ಶಿವಮೊಗ್ಗ(ಡಿ.21) ರಾಮಚಂದ್ರಾಪುರ ಮಠದ ಗುರುಪರಂಪರೆ, ಜೀವನ ಮೌಲ್ಯ ಸಾರುವ ದಿವ್ಯಜೀವನ ಪುಸ್ತಕ ಲೋಕಾರ್ಪಣೆಯಾಗಿದೆ.  ವಿದ್ವಾಂಸ ಜಗದೀಶ ಶರ್ಮಾ ಸಂಪ  ಬರೆದಿರುವ ದಿವ್ಯಜೀವನ ಪುಸ್ತಕ ಇಂದು, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೆರೆಕೊಪ್ಪದ ಸೋಮಶೇಖರ್ ಕಾಶೈನ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

ರಾಮಚಂದ್ರಾಪುರ ಮಠದ ಹಿಂದಿನ ಪೀಠಾಧಿಪತಿಗಳಾದ ಶ್ರೀಶ್ರೀ ರಾಘವೇಂದ್ರಭಾರತಿ ಮಹಾಸ್ವಾಮಿಗಳ ಜೀವನ ಮತ್ತು ಸಂದೇಶಗಳನ್ನೊಳಗ ಈ ಪುಸ್ತಕ ಇದಾಗಿದೆ.  ಇದೇ ವೇಳೆ ಮಾತನಾಡಿದ ರಾಘವೇಶ್ವರ ಸ್ವಾಮೀಜಿ ನಮ್ಮ ಹಿಂದಿನ ಗುರುಗಳು ಗೌರವಾರ್ಹರು. ಗುರುಪೀಠವನ್ನು ಪರಂಪರೆಯ ಮೌಲ್ಯದಂತೆ ಮುನ್ನಡೆಸಿದವರು. ಅಧ್ಯಯನ- ಅನುಭವಗಳಿಂದ ಪರಿಪೂರ್ಣರಾಗಿದ್ದರು. ಅಲ್ಲದೇ ತಪೋನಿಷ್ಠರು ಮತ್ತು ಶಿಷ್ಯವತ್ಸಲರು ಎಂದು ಹೊಗಳಿದರು.

ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.  ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ಈ ವೇಳೆ ಉಪಸ್ಥಿತರಿದ್ದರು.

error: Content is protected !!