Categories

Astavakra

ಕತ್ತಲೆಯ ಬದುಕಿಗೆ ಜ್ಞಾನದ ದರ್ಶನ

150.00

ISBN-10 978-81-969254-0-6
Published Year 2025
Language
Number of pages 128

Description

ಅನೇಕ ಘಟನೆಗಳಿಗೆ ಅಷ್ಟಾವಕ್ರನ ಜೀವನವು ಒಂದು ದೃಷ್ಟಾಂತವಾಗಿದೆ. ಇದೊಂದು ಉಪನಿಷತ್ತಿನ ಕಥೆ. ಆತನ ಹೆಸರೇ ಸೂಚಿಸುವಂತೆ ಅವನ ದೇಹದಲ್ಲಿ ಎಂಟು ಭಾಗಗಳು ವಕ್ರವಾಗಿದ್ದವು. ಅದಕ್ಕೆ ಅವನ ತಂದೆ ಅವನಿಗೆ ಕೊಟ್ಟ ಶಾಪವೇ ಕಾರಣ. ಆದರೆ, ಅಷ್ಟಾವಕ್ರ ಮಾತ್ರ ತಾಯಿಯ ಗರ್ಭದಲ್ಲಿರುವಾಗಲೇ ಜ್ಞಾನ ಪಡೆದ ಮಹಾನುಭಾವ. ಇಂತಹ ಮಹಾನುಭಾವನ ಜೀವನದ ಕಥೆ ರೋಮಾಂಚಕವಾಗಿದೆ. ಅಲ್ಲದೆ, ಅವನ ಜೀವನದಿಂದ ಪ್ರಪಂಚಕ್ಕೆ ಮೌಲ್ಯಯುತ ಸಂದೇಶ ಕೂಡ ಇದೆ. ಜೀವನದ ಅರ್ಥವನ್ನು ಕಲಿಸಲು ನಿಯತಿ ತನ್ನದೇ ಶೈಲಿಯಲ್ಲಿ ಪಾಠವನ್ನು ಮಾಡುತ್ತದೆ ಎನ್ನುವುದಕ್ಕೆ ಅಷ್ಟಾವಕ್ರನ ಜೀವನ ಒಂದು ಉದಾಹರಣೆಯಾಗುತ್ತದೆ. ಅಷ್ಟಾವಕ್ರನ ಜೀವನದಲ್ಲಿ, ಅವಮಾನವಿದೆ, ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ತಪ್ಪನ್ನು ತಪ್ಪು ಎಂದು ಹೇಳುವ ಧೀರತನವಿದೆ, ಸನ್ನಿವೇಶಗಳನ್ನು ಎದುರಿಸುವ ಧೈರ್ಯವಿದೆ, ಸಂಬಂಧಗಳ ಮೌಲ್ಯವಿದೆ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರದಿಂದ ಆಗುವ ಪರಿಣಾಮಗಳಿವೆ.

Reviews

There are no reviews yet.

Be the first to review “Astavakra”

Your email address will not be published. Required fields are marked *