Description
ಯಾರಿಗೂ ಕೇಡು ಬಯಸದೆ, ಎಲ್ಲರನ್ನೂ ಪ್ರೀತಿಸುವ, ಸುಸಂಸ್ಕೃತ ವ್ಯಕ್ತಿತ್ವಕ್ಕೆ ಸಮಾಜದೊಳಗಿನ ಹಾಗೂ ವ್ಯಕ್ತಿಗಳೊಳಗಿನ ಒಳಿತನ್ನು ಬೆಳಗಿಸುವ ಮತ್ತು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಗರ್ತಿಕೆರೆ ರಾಘಣ್ಣನ ಬದುಕು ಮತ್ತು ಕಲೆ ಈ ಕಾರಣಕ್ಕೆ ಬಹಳ ಮುಖ್ಯ.
ಕೆಟ್ಟ ಹಾರೋನಿಯಂನಲ್ಲೂ ಸರಿಯಿದ್ದ ಮನೆಗಳನ್ನು ಮಾತ್ರ ಉಪಯೋಗಿಸಿಕೊಂಡು ಸುಂದರವಾಗಿ ಹಾಡುವಾಗ ರಾಘಣ್ಣ ತನ್ನ ಹಾಡನ್ನು ಕೆಡಿಸಿಕೊಳ್ಳುವುದಿಲ್ಲ, ವಾದ್ಯದ ಕೇಡನ್ನೂ ತೋರಿಸುವುದಿಲ್ಲ. ಕರ್ಕಶ ಕಠೋರ ಸಾಮಾಜಿಕ ಸಪ್ಪಳಗಳಲ್ಲಿಯೂ ನಾದವನ್ನು ಹಿಡಿದವನು, ಹಾಡಿದವನು ನಮ್ಮ ರಾಘಣ್ಣ.
ಬಂಧು-ಬಾಂಧವರು, ಒಡನಾಡಿಗಳು. ಶಿಕ್ಷಕರು, ಕವಿಗಳು, ಕಲಾವಿದರು. ಅಧಿಕಾರಿಗಳು, ರಾಜಕಾರಣಿಗಳು, ಸಂನ್ಯಾಸಿಗಳು, ಮುದುಕರು, ಮಕ್ಕಳು ಹೀಗೆ ಅನೇಕ ಸ್ತರದವರೊಡನೆ ಕಾಡುನಾಡುಗಳಲ್ಲಿ ಹಾಡುತ್ತಾ ಸಂಭ್ರಮಿಸಿದವನು ರಾಘಣ್ಣ. ಅಲ್ಲೆಲ್ಲ ಇರುವ ಋಜುತ್ವವನ್ನು ಆಹ್ವಾನಿಸಿಕೊಂಡ ಹಂಸ. ಅವನ ಸಂಪರ್ಕಕ್ಕೆ ಬಂದವರಿಗೆಲ್ಲ ರಾಘಣ್ಣ ಎಂದರೆ ದ್ವೇಷವಿಲ್ಲದ ನಮ್ಮೊಳಗಿನ ‘ರಾಗ’ಣ್ಣ.






Reviews
There are no reviews yet.