Description
ಇಂದಿನ ಪೀಳಿಗೆಯೇಕೆ ಸಂಸ್ಕಾರವಂತವಾಗುತ್ತಿಲ್ಲ? ತ್ಯಾಗ-ಔದಾರ್ಯ-ಸಹನೆ. ಮುಂತಾದ ಸದ್ಗುಣಗಳು ಅವರ ಹೃದಯದಲ್ಲಿ ಪ್ರಕಾಶಗೊಳ್ಳುತ್ತಿಲ್ಲವೇಕೆ? ಜೀವನವನ್ನು ಅರ್ಥಮಾಡಿಕೊಳ್ಳುವಲ್ಲಿ ಅವರೇಕೆ ವಿಫಲರಾಗುತ್ತಿದ್ದಾರೆ? ಹತಾಶೆ-ವಿಷಾದದಂತಹ ಬಂದಳಿಕೆಗಳೇಕೆ ಅವರನ್ನು ಆವರಿಸಿದೆ? ಇವೇ ಮುಂತಾದ ಪ್ರಶ್ನೆಗಳು ಇಂದು ಜಾಗತಿಕ ಪ್ರಶ್ನೆಗಳಾಗಿ ಮಾನವ ಜನಾಂಗವನ್ನು ಕಾಡುತ್ತಿವೆ.
ಇಂದಿನ ಬದುಕು ವ್ಯಾಪಾರೀಕರಣಗೊಂಡಿದೆ. ಎಲ್ಲವನ್ನೂ ಕೊಡು-ಕೊಳ್ಳುವ ವ್ಯವಹಾರದ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಉಪಯೋಗಿಸಿ ಎಸೆಯುವ ವಿಷಯ ಕೃತಜ್ಞತೆಯಿಂದ ಭಾವಿಸುವ ವಿಷಯದವರೆಗೂ ವ್ಯಾಪಿಸಿದೆ. ಅದು ಗೋವಾಗಿರಬಹುದು, ವೃದ್ಧರಾದ ತಂದೆ-ತಾಯಿಯರಾಗಿರಬಹುದು, ಅಕ್ಷರ ಕಲಿಸಿದ ಅಧ್ಯಾಪಕರಾಗಿರಬಹುದು. ನಮಗೆ ಅವರ ಉಪಯುಕ್ತತೆ ಮುಗಿದ ಮೇಲೆ ಅವರನ್ನು ಸಾಕುವುದೋ, ಸಲಹುವುದೋ, ಗೌರವಿಸುವುದೋ ಇವೆಲ್ಲ ದಡ್ಡತನವೆನಿಸುತ್ತದೆ.
ಇವಕ್ಕೆಲ್ಲ ಕಾರಣ ಮಕ್ಕಳಿಗೆ ಶಿಕ್ಷಣದಲ್ಲಿ ಏನನ್ನು ನೀಡಬೇಕಾಗಿತ್ತೋ ಅದನ್ನು ನೀಡದಿರುವುದೇ ಆಗಿದೆ ಎನ್ನುವದನ್ನು ನಾವೆಲ್ಲ ಅರಿಯದ ವಿಷಯವೇನೂ ಅಲ್ಲ. ಆದರೆ ಅದನ್ನು ನೀಡುವ ಪ್ರಯತ್ನ ಮಾತ್ರ ಸಮಗ್ರವಾಗಿ ಆರಂಭಗೊಂಡಿಲ್ಲ.
ಪ್ರಕೃತ ವಿಷಯದ ಮೇಲೆ ಚರ್ಚೆಯೊಂದನ್ನು ಧರ್ಮಭಾರತೀ ನಡೆಸಿತು. ಪ್ರತಿಸಂಚಿಕೆಯಲ್ಲಿ ಈ ಕುರಿತಾದ ಲೇಖನಗಳು ಪ್ರಕಟವಾದವು. ಶಿಕ್ಷಣತಜ್ಞರು-ಶಿಕ್ಷಕರು ಮತ್ತು ಪೋಷಕರುಗಳು ಇದರಲ್ಲಿ ಭಾಗವಹಿದ್ದರು. ಓದುಗರೂ ಸ್ಪಂದಿಸಿದ್ದರು.
ಇವುಗಳೆಲ್ಲದರ ಸಂಕಲನವಿದು






Reviews
There are no reviews yet.