Description
ತಾರೋಡಿ ಸುರೇಶರವರು ರಚಿಸಿರುವ, ಕೇವಲ ಎಪ್ಪತ್ತೇ ಪುಟಗಳ, ಜಗದ್ಗುರು ಶ್ರೀಕೃಷ್ಣನೆಂಬ ಕೃತಿಯು ಗಾತ್ರದಲ್ಲಷ್ಟೆ ಕಿರಿದು; ವಸ್ತುವೂ ನಿರೂಪಣೆಯೂ ಹಿರಿದೇ.
ಶ್ರೀಕೃಷ್ಣ-ಚರಿತದ ಸಂಗ್ರಹ-ಮಾತ್ರವಲ್ಲದೆ, ಕೃಷ್ಣನ ಚಾರಿತ್ರಿಕತೆ, ಅವತಾರ-ತತ್ತ್ವಗಳ ಪರಿಶೀಲನೆಯಲ್ಲಿದೆ. ಜನನ-ಕಾಲದಲ್ಲೇ ದೇವಕಿಗೆ ಗೋಚರಿಸಿದ ಆತನ ದೈವ-ಸ್ವರೂಪ, ನವನೀತ-ಚೌರ್ಯಾದಿ- ಬಾಲ್ಯ-ಲೀಲೆಗಳಲ್ಲೂ ತೋರುವ ತಾತ್ತಿಕತೆಗಳು; ವೇಣು-ಗಾನ-ಪ್ರಭಾವ, ರಾಸ-ಲೀಲೆಯ ಆಂತರ್ಯ, ಮಹಾಭಾರತ-ಯುದ್ಧದಲ್ಲಿ ಕೃಷ್ಣನ ಪಾತ್ರ, ಭಗವದ್ಗೀತಾ-ಸಾರ -ಮುಂತಾದ ವಿಷಯಗಳು ಇಲ್ಲಿ ಲಲಿತವಾಗಿ ನಿರೂಪಿತವಾಗಿವೆ. ಬಹುತೇಕವಾಗಿ ಶ್ರೀರಂಗ-ಮಹಾಗುರುಗಳ ಭಾವ-ಭಾಷೆಗಳನ್ನೇ ಬಳಸಿ ಸೊಗಸಾಗಿ ನಿರೂಪಿಸಲಾಗಿದೆ. ಎಲ್ಲರೂ ಓದಲೇಬೇಕಾದದ್ದು.






Reviews
There are no reviews yet.