Description
ಸಂಗೀತ ಕ್ಷೇತ್ರಕ್ಕೆ ತ್ಯಾಗರಾಜರ ಕೊಡುಗೆಯನ್ನ ಕೆಲವು ಪುಟಗಳಲ್ಲಿ ವರ್ಣಿಸುವುದೆಂದರೆ ಸಾಗರವನ್ನು ಉದ್ಧರಣೆಯಲ್ಲಿ ಹಿಡಿದಿಡುವಂಥ ಸಾಹಸ.
ಪಂಡಿತೋತ್ತಮರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಂಥವರಿಗೆ ಮಾತ್ರ ಈ ಸಾಹಸ ಸಾಧ್ಯ. ಈ ಹೊತ್ತಿಗೆಯೇ ಮುಕ್ಕಾಲು ಎಡುಪಿನ ಮಧ್ಯಮ ಕಾಲದ ಕೃತಿಯಂತಿದೆ. ತ್ಯಾಗರಾಜರ ಪರಂಪರೆ, ಜೀವನ, ವಿಶೇಷ ಹಿನ್ನೆಲೆಯುಳ್ಳ ಕೃತಿ ವಿಚಾರಗಳೇ ಅದರ ಪಲ್ಲವಿ, ಅನುಪಲ್ಲವಿ, ಚರಣಗಳು. ಸಂಗೀತ ವಿದ್ಯಾರ್ಥಿಗಳಿಗಂತೂ ಇದೊಂದು ಓದಲೇಬೇಕಾದ ಛಾಪು ತಾಳ ನಿಬದ್ಧ ಕೈಪಿಡಿ. ಅಷ್ಟು ಬಿಗಿ, ಅಷ್ಟು ಅಚ್ಚುಕಟ್ಟು.






Reviews
There are no reviews yet.