Description
ಪ್ರಾಚೀನ ಭಾರತೀಯರದ್ದು ಅನ್ವೇಷಣೆಯಲ್ಲಿ ಅದ್ಭುತ ಸಾಧನೆ. ಅಪಾರ ಮೇಧೆ, ಅನುಪಮ ಕೌಶಲ, ಅನನ್ಯ ಸಾರ್ಥ್ಯ, ಅವಿರತ ಪ್ರಯತ್ನ ಇದೆಲ್ಲದರಿಂದ ಸಾಧಿತವಾಗಿದ್ದು ಅದು. ತಪಸ್ಸಿನ ಮೂಲಕ ಅಧ್ಯಾತ್ಮವನ್ನು ಕಂಡುಕೊಂಡ ಅವರು ಭೌತಿಕದ ಶೋಧದಿಂದೇನೂ ದೂರ ಸರಿದವರಲ್ಲ. ಮೂಲದಿಂದ ವಿಸ್ತಾರವಾದ ಸೃಷ್ಟಿಯೂ ಅವರಿಗೆ ಮುಖ್ಯವೇ ಆಗಿತ್ತು. ಮತ್ತೆ ಮೂಲಕ್ಕೆ ಮರಳಲು ಭೌತಿಕವೇ ಸಾಧನ ಎನ್ನುವುದೂ ಅವರ ನಿಲುವಾಗಿತ್ತು. ಅಲ್ಲದೆ ಭೌತಿಕದ ಸುಖ ಅವರಿಗೆ ತಿರಸ್ಕೃತವಾಗಿರಲಿಲ್ಲ. ಹಾಗಾಗಿ ಅವರು ಒಳ-ಹೊರ ಎರಡನ್ನೂ ಶೋಧಿಸಿದರು, ಬದುಕಿನ ಸಮಗ್ರತೆಯನ್ನು ಕಂಡುಕೊಂಡರು.
ಪ್ರಕೃತ ಈ ಕೃತಿ, ಪ್ರಾಚೀನ ಭಾರತೀಯರ ಭೌತಿಕ ಸಂಶೋಧನೆಗಳ ಮೇಲೆ ಬೆಳುಕು ಚೆಲ್ಲುತ್ತದೆ. ಪ್ರಾಜ್ಞರೂ, ಶಿಕ್ಷಣವೇತ್ತರೂ ಆದ ಅ.ಪು.ನಾರಾಯಣಪ್ಪನವರು ಸುದರ್ಘ ಕಾಲದ ಗ್ರಂಥಾಧ್ಯಯನದ ಫಲಶ್ರುತಿಯಾಗಿ ಈ ಕೃತಿಯನ್ನು ರಚಿಸಿದ್ದಾರೆ.
ಪ್ರಾಚೀನರನ್ನು ಮತ್ತು ಪ್ರಾಚೀನವನ್ನು ರ್ಥ ಮಾಡಿಕೊಳ್ಳಲು ಇದೊಂದು ಪ್ರಮುಖ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ.
Reviews
There are no reviews yet.