Categories

Nityopasana

45.00

Published Year 2016
Language
Number of pages 68

Description

ಸಂಧ್ಯಾಕಾಲ ದೈವನಿರ್ಮಿಸಿಕೊಟ್ಟ ಅನುಕೂಲ ಕಾಲ. ದಿನದ ಎಲ್ಲ ಸಮಯವನ್ನೂ ಸೃಷ್ಟಿಯನ್ನು ಅರ್ಥಮಾಡಿಕೊಳ್ಳಲಿಟ್ಟು, ಸಂಧ್ಯಾಸಮಯವನ್ನು ಸೃಷ್ಟಿಶನನ್ನು ಅರಿಯಲಿತಾ ದಿವ್ಯಕಾಲ, ಹಾಗಾಗಿಯೇ ಜ್ಞಾನಿಗಳು ‘ಸಂಧ್ಯಾಯಾ ಅಪರಂ ದೈವಂ ಬ್ರಾಹ್ಮಣಸ್ಯ ನ ವಿದ್ಯತೇ’ ಎಂದಿದ್ದು. ದೇವನನ್ನು ಸಂಧಿಸುವ ಕಾಲವದು.

ಈ ಕಾಲದಲ್ಲಿ ಉಪಾಸನೆಯನ್ನು ಮಾಡಬೇಕು. ‘ಅಹರಹ: ಸಂಧ್ಯಾಮುಪಾಸೀತ” ಎನ್ನುವಂತೆ ಹಗಲು-ರಾತ್ರಿಗಳ ಸಂಧ್ಯೆಯನ್ನು ಉಪಾಸನೆ ಮಾಡಬೇಕು. ಉಪಾಸನ ಎಂದರೆ ಸಮೀಪ ಕುಳಿತುಕೊಳ್ಳುವುದು. ದೇವನೊಡನೆ ಕೆಲ ಕಾಲ ಕುಳಿತುಕೊಳ್ಳುವ ಕಾರ್ಯ ಸಂಧ್ಯಾವಂದನೆ.

ಪ್ರಸ್ತುತ, ಇಂತಹ ಉತ್ಕೃಷ್ಟ ಕಾಲದ ಉಪಾಸನೆ ಜನಮಾನಸದಿಂದ ದೂರವಾಗಿ ಮನುಕುಲ ತನ್ನ ಕರ್ತವ್ಯವನ್ನು ಮರೆತಿದೆ. ಇದನ್ನು ಶ್ರೀಮಠದ ಧರ್ಮಕರ್ಮವಿಭಾಗ ಮತ್ತೆ ನೆನಪಿಸಿ ನಿತ್ಯೋಪಾಸನೆಯನ್ನು ಜನಮಾನಸದಲ್ಲಿ ತುಂಬಿ ಕರ್ತವ್ಯದಲ್ಲಿ ತೊಡಗಿಸುವ ಅಭಿಯಾನರೂಪದ ಕಾರ್ಯ ಮಾಡುತ್ತಿರುವುದು ನಮ್ಮಂತರಂಗಕ್ಕೆ ಸಂತಸ ತಂದಿದೆ.

ನಿಮ್ಮ ಈ ಸತ್ಕಾರ್ಯ ಸಫಲವಾಗಿ, ಆಸ್ತಿಕ ಸಮಾಜನಿರ್ಮಾಣವಾಲಿ ಎಂದೂ, ಅದಕ್ಕೆ ಪೂರಕವಾದ ಈ ಗ್ರಂಥವು ಅಭಿಯಾನಕ್ಕೆ ಸಹಕಾರಿಯಾಗಲಿ ಎಂದೂ ಅದಾರಾಧ್ಯ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ-ದೇವತಾನುಗ್ರಹದಿಂದ ಒಳಿತಾಗಲೆಂದು ಹಾರೈಸುತ್ತೇವೆ.

Reviews

There are no reviews yet.

Be the first to review “Nityopasana”

Your email address will not be published. Required fields are marked *