Categories

ಶ್ರೀಸದಾಶಿವ ಬ್ರಹ್ಮೇಂದ್ರ | Sri Sadashiva Brahmendra

80.00

ISBN-10 978-81-977994-2-6
Published Year 2014
Language
Number of pages 72

Description

ಸನಾತನ ಧರ್ಮ ಎರಡು ಬಹಳ ಮುಖ್ಯವಾದ ರೋಗದಿಂದ ಬಳಲುತ್ತಿದೆ. ಒಂದು ಈ ಧರ್ಮೀಯರಿಗೆ ಸ್ವತಃ ನಮ್ಮ ಧರ್ಮ, ಅದರ ಶ್ರೇಷ್ಠತೆ, ಮೌಲ್ಯ, ಇತಿಹಾಸ, ಜ್ಞಾನ, ಅವಧೂತತೆ, ಲೌಕಿಕ ಮತ್ತು ಅಲೌಕಿಕತೆಯನ್ನು ಬೆಸೆದು ಹೊಸೆದ ಅತ್ಮಸಾಕ್ಷಾತ್ಕಾರ, ಸಂಸ್ಕಾರದ ಮಹೋನ್ನತ ಪರಂಪರೆಯ ಅರಿವೇ ಇಲ್ಲದಿರುವುದು. ಎರಡನೆಯದ್ದು ಆ ಅರಿವಿನ ಸಿಂಧುವನ್ನು ಬಿಂದುವಿನಷ್ಟೂ ಪೀಳಿಗೆಗೆ ಹಂಚಬೇಕೆನ್ನುವ ಕನಿಷ್ಠ ಎಚ್ಚರವನ್ನೂ ಹೊಂದಿಲ್ಲದೇ ಇರುವುದು. ಈ ಹಿನ್ನೆಲೆಯಲ್ಲಿ ‘ಗುರುಗ್ರಂಥಮಾಲಿಕೆ’ಯ ಒಂದೊಂದು ಎಸಳೂ ಅತ್ಯಂತ ಮೌಲಿಕ ಮತ್ತು ವರ್ತಮಾನದ ಧರ್ಮಗ್ಲಾನಿಯ ಸಂದರ್ಭದ ಆತ್ಯಂತಿಕ ಜರೂರತ್ತು ಅಂತ ನನ್ನ ಭಾವನೆ.
ಜ್ಞಾನ, ಧ್ಯಾನ, ಪೂಜೆ, ತಪಸ್ಸು, ಆಕಾರ-ನಿರಾಕಾರ, ಅಂತರಂಗ-ಬಹಿರಂಗ, ಸಾಕ್ಷಾತ್ಕಾರ, ದರ್ಶನ, ಯೌಗಿಕ ಶಕ್ತಿ, ಮೌನ, ಮೌನದ ಆಳದ ಬ್ರಹ್ಮಾಂಡ ಅಗ್ನಿ ಈ ಎಲ್ಲವುಗಳ ಬ್ರಹ್ಮರೂಪಿಯಾಗಿ ನಮ್ಮ ಮಧ್ಯೆ 18ನೇ ಶತಮಾನದ ಮಹಾಪ್ರಸಾದವಾಗಿ ಸನಾತನ ಧರ್ಮಕ್ಕೆ ದಕ್ಕಿದ ‘ಶ್ರೀಸದಾಶಿವ ಬ್ರಹ್ಮಂದ್ರ’ರ ಕುರಿತಾದ ಈ ಕಿರು ಹೊತ್ತಗೆ ವರ್ತಮಾನದ ಅಕ್ಷಯಪಾತ್ರೆ. ಅವರ ಜೀವನ ಮತ್ತು ಸಾಧನೆಗಳು ಮನುಕುಲಕ್ಕೆ ದಕ್ಕಿದ ಕಾಲಾತೀತ ಭಾಷ್ಯ.

Reviews

There are no reviews yet.

Be the first to review “ಶ್ರೀಸದಾಶಿವ ಬ್ರಹ್ಮೇಂದ್ರ | Sri Sadashiva Brahmendra”

Your email address will not be published. Required fields are marked *