Description
ಕರ್ನಾಟಕ ಸಂಗೀತ ಪರಂಪರೆಯಲ್ಲಿ ಶ್ರೀಭದ್ರಾಚಲರಾಮದಾಸರಿಗೆ ಭದ್ರವಾದೊಂದು ಸ್ಥಾನವಿದೆ. ಸಂತ ಕಬೀರರನ್ನು ಗುರುವಾಗಿ ಸ್ವೀಕರಿಸಿದ ರಾಮದಾಸರು, ೧೭ನೇ ಶತಮಾನದಲ್ಲಿ ಬಳಕೆಯಲ್ಲಿದ್ದ ದೇಸಿಲಯದ ಸಕಲ ವೈವಿಧ್ಯಗಳನ್ನೂ ಸಮರ್ಥವಾಗಿ ದುಡಿಸಿಕೊಂಡ, ಭಕ್ತಿಪರಂಪರೆಯನ್ನು ಉಜ್ಜಲಗೊಳಿಸಿದ, ರಾಮಭಕ್ತಿಯ ಭಾವತರಂಗಗಳನ್ನು ದಿಕ್ಕುದಿಕ್ಕುಗಳಿಗೆ ಹಚ್ಚಿಸಿ ಬೆಳೆಸಿದ ಪರಮ ಹರಿದಾಸರು, ತ್ಯಾಗರಾಜರ ಸಾಧನಾಪಥಕ್ಕೆ ಹಾಸುಗಲ್ಲಾಗಿ ಒದಗಿದವರು ರಾಮದಾಸರಿಗೆ ರಾಮ ಅದೆಲ್ಲೋ ದೂರದಲ್ಲಿ ನಿಂತ ದೇವರಲ್ಲ; ತನ್ನೊಳಗಿನ ಶಕ್ತಿ, ತನ್ನ ಕೈಯಳತೆಗೆ ಸಿಗುವ ಅಪಾರಲೌಕಿಕ.
ಅವರ ಬದುಕಿನ ವಿವರಗಳನ್ನು ಸಂಕ್ಷಿಪ್ತವಾಗಿ, ಸ್ಪಷ್ಟಭಾಷೆಯಲ್ಲಿ, ಸರಳಗನ್ನಡದಲ್ಲಿ ಶ್ರೀ ಮಂಜುನಾಥ ಭಟ್ಟರು ಬರೆದಿದ್ದಾರೆ. ಭದ್ರಾಚಲಮ್ ಹೇಗೆ ಅಚಲ ಭದ್ರ ಬೆಟ್ಟವೋ ಹಾಗೆ ರಾಮದಾಸರ ವ್ಯಕ್ತಿತ್ವವೂ ಅವರ ಈ ಕಥೆ ನಮ್ಮನ್ನೂ ಅವರಂತೆಯೇ ಭದ್ರಾಚಲವಾಗಿಸಲಿ.






Reviews
There are no reviews yet.